#

ಅಪ್ಪಾ ಶಾಂತವೀರೇಶಾ

ಅಪ್ಪಾ ಶಾಂತವೀರೇಶಾ ಶಾಂತಿಸಾಗರವೇ ನೀನೇ ಅಪ್ಪಾ ||ಪ||

ಒಂದು ದಳದ ಕಮಲದಲ್ಲಿ ಹೊಮ್ಮಿ ಬಂದ ಲಿಂಗವೇ ಮಧ್ಯ ಪ್ರಾಣ ಲಿಂಗವೇ ಸತ್ಯ ಶಾಂತಿ ಲಿಂಗವೇ ಓಂ ನಮಃ ಶಿವಾಯ ಓಂ ನಮಃ ಶಿವಾಯ||1||

ಎರಡು ದಳದ ಕಮಲದಲ್ಲಿ ಎದ್ದುಬಂದ ಲಿಂಗವೇ ಆತ್ಮಜ್ಯೋತಿ ಲಿಂಗವೇ ಶಿವನ ರೂಪಿ ಲಿಂಗವೇ ಓಂ ನಮಃ ಶಿವಾಯ ಓಂ ನಮಃ ಶಿವಾಯ||2||

ಮೂರು ದಳದ ಕಮಲದಲ್ಲಿ ಮೂಡಿ ಬಂದ ಲಿಂಗವೇ ಮೂರು ಕಣ್ಣ ಲಿಂಗವೇ ಮುಕ್ಕೋಟಿ ಲಿಂಗವೇ ಓಂ ನಮಃ ಶಿವಾಯ ಓಂ ನಮಃ ಶಿವಾಯ||3||

ನಾಲ್ಕು ದಳದ ಕಮಲದಲ್ಲಿ ನಾಗಜ್ಯೋತಿ ಲಿಂಗವೇ నాడి శ్రిఁయ లింగేవేఁ భక్త ప్రిలయ లింగేవెల ಓಂ ನಮಃ ಶಿವಾಯ ಓಂ ನಮಃ ಶಿವಾಯ ||4||

ಐದು ದಳದ ಕಮಲದಲ್ಲಿ ಐಕ್ಯನಾದ ಲಿಂಗವೇ ಪಂಚ ಮುಖಿ ಲಿಂಗವೇ ಪಂಚ ಪ್ರಾಣ ಲಿಂಗವೇ ಓಂ ನಮಃ ಶಿವಾಯ ಓಂ ನಮಃ ಶಿವಾಯ ||5||

ಆರು ದಳದ ಕಮಲದಲ್ಲಿ ಹಾರಿ ಬಂದ ಲಿಂಗವೇ ಹರನ ಆತ್ಮ ಲಿಂಗವೇ ಅಡವಿಸ್ವಾಮಿ ಲಿಂಗವೇ ಓಂ ನಮಃ ಶಿವಾಯ ಓಂ ನಮಃ ಶಿವಾಯ||6||

ಏಳು ದಳದ ಕಮಲದಲ್ಲಿ ಎದ್ದಲಿಂಗವೇ ಲಿಂಗವೇ ಏಳುಲೋಕ ಲಿಂಗವೇ ಏಳುತತ್ವ ಲಿಂಗವೇ ಓಂ ನಮಃ ಶಿವಾಯ ಓಂ ನಮಃ ಶಿವಾಯ

||7||

ಎಂಟು ದಳದ ಕಮಲದಲ್ಲಿ ಘಂಟೆನಾದ ಲಿಂಗವೇ ಅಷ್ಟುದಿಕ್ಕು ಲಿಂಗವೇ ನಿನ್ನ ವಶವು ಲಿಂಗವೇ ಓಂ ನಮಃ ಶಿವಾಯ ಓಂ ನಮಃ ಶಿವಾಯ||8||

ಒಂಭತ್ತು ದಳದ ಕಮಲದಲ್ಲಿ ತುಂಬಿ ಬಂದ ಲಿಂಗವೇ ಒಂಭತ್ತು ಗ್ರಹವು ಕಾಡದಂತೆ ಕಾಯೋ ನಮೋ ಲಿಂಗವೇ ಓಂ ನಮಃ ಶಿವಾಯ ಓಂ ನಮಃ ಶಿವಾಯ||9||

ಹತ್ತು ದಳದ ಕಮಲದಲ್ಲಿ ಹತ್ತನಾದ ಲಿಂಗವೇ ಹತ್ತು ತಲೆಯ ರಾವಣಗೊಲಿದ ಕರುಣಾಳು ಲಿಂಗವೇ ಓಂ ನಮಃ ಶಿವಾಯ ಓಂ ನಮಃ ಶಿವಾಯ

||10||