#

ವಚನ ಮಂಗಲ

ಅಮೃತ ಪರಮಾಮೃತ ಬಸವರ ಚರಿತಾಮೃತ ಅಂತರಂಗದ ಅಮೃತ ಅಂತರನುಭವದಮೃತ||ಪ||

ನೀತಿ ಪ್ರೀತಿ ಭಾವ ಭಕ್ತಿ ಸುರಿಸುವಾ ಕರುಣಾಮೃತ ನ್ಯಾಯ ನಿಷ್ಟೆ ಸೌಮ್ಯ ಕಾಯಕ ಕಲಿಸುವಾ ಜೀವಾಮೃತ||1||

ಸಾವು ನೋವಿಗೆ ದಾರಿತೋರುವ ನಿತ್ಯನೂತನದಮೃತ ಮನದ ಮೈಲಿಗೆ ತೊಳೆಯುವಂತಹ ಮಂಗಲ ಮಹದಮೃತ||2||

ಅಷ್ಠಾವರಣ ಪಂಚಾಚಾರ ಆರುಸ್ಥಲಗಳ ಅಮೃತ ಶ್ರೇಷ್ಠ ಕಾಯಕ ದಾಸೋಹ ಅನುಭವದ ಶರಣಾಮೃತ ||3||

ಭಕ್ತಿಯೇ ಭಕ್ತಾಮೃತ ಜ್ಞಾನವೆ ಜ್ಞಾನಾಮೃತ ಮಹಾಂತ ಕಂದ ನುಡಿಯುವಂತಹ ಶರಣರ ವಚನಾಮೃತ||4||

ಮುದಗಲ್ ಶ್ರೀ ಮಹಾಂತ ಸ್ವಾಮಿಜಿ